top of page
ಮಹಾತ್ಮಾ ಗಾಂಧಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಿದ್ರಕಾನ
ಕಲಾ ಸಂಪದ
ಲಲಿತಕಲಾ ಕೇಂದ್ರ


ಸಾಹಿತ್ಯ ಸಂಗೀತ ಕಲಾ ವಿಹೀನಃ, ಸಾಕ್ಷಾತ್ ಪಶು ಪುಚ್ಛ ವಿಶಾಣ ಹೀನಃ ಎಂಬ ಸಂಸ್ಕೃತ ಸುಭಾಷಿತವೊಂದಿದೆ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ ಅಥವಾ ಇನ್ನವುದೇ ಕಲಾ ಅಭಿರುಚಿಗಳಲ್ಲಿ ಆಸಕ್ತಿ ಇಲ್ಲದವನು ಪಶುವಿಗೆ ಸಮಾನ ಎಂಬಂತೆ. ನಮ್ಮ ವ್ಯಕ್ತಿತ್ವದ ನಿರ್ಮಾಣದಲ್ಲಿ ಲಲಿತ ಕಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಕಲಾ ಪ್ರಕಾರವೊಂದು ನಮ್ಮಲ್ಲಿ ವಿಶೇಷ ಉತ್ಸಾಹವನ್ನು ಉಂಟುಮಾಡಿ, ಚೈತನ್ಯವನ್ನು ತುಂಬುವುದು ಸುಳ್ಳಲ್ಲ. ಆದ್ದರಿಂದ ನಮ್ಮ ಗ್ರಾಮೀಣ ಭಾಗದ ಜನರು ಇದರಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ನಮ್ಮ ಸಂಸ್ಥೆಯ ಅಡಿಯಲ್ಲಿ ಲಲಿತ ಕಲಾ ಕೇಂದ್ರವನ್ನು ಆರಂಭಿಸಿದ್ದೇವೆ. ಪ್ರಾರಂಭದಲ್ಲಿ ಸಂಗೀತ ಗಾಯನ ಮತ್ತು ವಾದನ (ತಬಲಾ) ತರಗತಿಗಳನ್ನು ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಚಿತ್ರಕಲೆ, ಭರತನಾಟ್ಯ ಮುಂತಾದ ಲಲಿತಕಲಾ ತರಗತಿಗಳನ್ನು ಪ್ರಾರಂಭಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸುರೇಂದ್ರ ಹೆಗಡೆ : 9108351884, 9448223384
ಸಂಧ್ಯಾ ಶಾಸ್ತ್ರಿ : 9880188846, 8431251634

bottom of page