top of page
Marble Surface

           ನಿಗದಿತ ಪಠ್ಯಕ್ಕೆ ಅನುಗುಣವಾಗಿ ಗುಣಾತ್ಮಕ ಶಿಕ್ಷಣವನ್ನು ನೀಡುವುದು ನಮ್ಮ ಆದ್ಯತೆ.  ಆದರೆ ಇಂದಿನ ಈ ಆಧುನಿಕ ಬದುಕಿನಲ್ಲಿ ಪಠ್ಯವನ್ನು ಹೊರತಾಗಿನ ಕಲಿಕೆಯು ಅತಿ ಅವಶ್ಯಕ. ಪಠ್ಯದೊಂದಿಗೆ ಇನ್ನಿತರ ಪ್ರಾಯೋಗಿಕ ಕಲಿಕೆಯು ಕೂಡ ಮಕ್ಕಳಿಗೆ ದೊರೆಯಬೇಕು ಎನ್ನುವುದು ನಮ್ಮ ಆಶಯ. ಆಧುನಿಕ ಕಲಿಕಾ ಪದ್ಧತಿಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಇನ್ನೂ ಉತ್ತಮ ಶಿಕ್ಷಣ ನೀಡಲು ನಮ್ಮೊಂದಿಗೆ ಕೈ ಜೋಡಿಸಿ.  ಹೊಸತನದಿಂದ ಮತ್ತು ಕ್ರಿಯಾಶೀಲವಾಗಿರುವ ನಿಮ್ಮ ಚಿಂತನೆಗಳು ನಮ್ಮೊಂದಿಗೆ ಇದ್ದರೆ ನಾವು ಇನ್ನೂ ಹೆಚ್ಚಿನದಾಗಿ ಕಾರ್ಯೋನ್ಮುಖರಾಗಲು ಸಹಾಯವಾಗುತ್ತದೆ.

        ಇದರೊಂದಿಗೆ ಸಂಸ್ಥೆಯು ಆರ್ಥಿಕವಾಗಿ ಸಬಲವಾಗಿ ನಿಂತಾಗ ನಾವು ನಮ್ಮ ಅನೇಕ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.  ಆದ ಕಾರಣ ಈ ನಿಟ್ಟಿನಲ್ಲಿಯೂ ಕೂಡ ನಿಮ್ಮ ಸಹಕಾರ ನಮಗೆ ಅಗತ್ಯ. 

 

ತಮಗಿರುವ ಸೇವಾವಕಾಶಗಳು

1. ಮಕ್ಕಳ ದತ್ತು ಯೋಜನೆ

  •  ಅರ್ಧ ವಾರ್ಷಿಕ (ರೂ.2,000)

ಒಂದು ಸೆಮೆಸ್ಟರ್‌ ಗೆ ಒಬ್ಬ ವಿದ್ಯಾರ್ಥಿಗೆ ಪಟ್ಟಿ, ಪೆನ್‌, ಶಾಲಾ ಶುಲ್ಕ, ಸಮವಸ್ತ್ರ ಇವೇ ಮೊದಲಾದ ಶೈಕ್ಷಣಿಕ ವೆಚ್ಚಗಳಿಗಾಗಿ ಈ ಹಣವನ್ನು ಉಪಯೋಗಿಸಲಾಗುವುದು. ತಾವು ಕನಿಷ್ಠ ಒಬ್ಬ ವಿದ್ಯಾರ್ಥಿಯ ಅರ್ಧವಾರ್ಷಿಕ ಕಲಿಕಾ ಖರ್ಚನ್ನು ಪೂರೈಸಲು ಈ ಲಿಂಕ್‌ ಮೂಲಕ ಆನ್‌ ಲೈನ್‌ ಪೇಮೆಂಟ್‌ ಮಾಡಬಹುದು.

  • ವಾರ್ಷಿಕ (ರೂ.4,000)

ಒಂದು ವರ್ಷಕ್ಕೆ ಒಬ್ಬ ವಿದ್ಯಾರ್ಥಿಗೆ ಪಟ್ಟಿ, ಪೆನ್‌, ಶಾಲಾ ಶುಲ್ಕ, ಸಮವಸ್ತ್ರ ಇವೇ ಮೊದಲಾದ ಶೈಕ್ಷಣಿಕ ವೆಚ್ಚಗಳಿಗಾಗಿ ಈ ಹಣವನ್ನು ಉಪಯೋಗಿಸಲಾಗುವುದು. ತಾವು ಕನಿಷ್ಠ ಒಬ್ಬ ವಿದ್ಯಾರ್ಥಿಯ ವಾರ್ಷಿಕ ಕಲಿಕಾ ಖರ್ಚನ್ನು ಪೂರೈಸಲು ಈ ಲಿಂಕ್‌ ಮೂಲಕ ಆನ್‌ ಲೈನ್‌ ಪೇಮೆಂಟ್‌ ಮಾಡಬಹುದು.

2. ವಿದ್ಯಾರ್ಥಿಗಳ ಬಹುಮಾನ (ದತ್ತಿ ನಿಧಿಗಳು)
ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಸಾಧನೆಗಳಿಗೆ ಪ್ರೋತ್ಸಾಹ ನೀಡಲು  ದತ್ತಿ ನಿಧಿಗಳನ್ನು ನೀಡಲು ಅವಕಾಶವಿದೆ. ತಾವು ನೀಡಿದ ಹಣವನ್ನು ಠೇವಣಿಯಿಟ್ಟು, ಅದರಿಂದ ಬರುವ ಬಡ್ಡಿ ಹಣವನ್ನುನಿಮ್ಮ ಇಚ್ಛೆಯ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಈ ಕೆಳಗಿನ ಲಿಂಕ್‌ ಮೂಲಕ ನೀವು ಆನ್‌ ಲೈನ್‌ ಪೇಮೆಂಟ್‌ ಮಾಡಬಹುದು.

3. ಕಟ್ಟಡ ನಿಧಿ
ಅಗತ್ಯತೆಗನುಗುಣವಾಗಿ ಕಾಲಕಾಲಕ್ಕೆ ಕಟ್ಟಡ ರೆಪೇರಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕಾಗಿ ನಿಮ್ಮೆಲ್ಲರ ಸಹಕಾರ ನಮಗೆ ಅಗತ್ಯ.  ಕೆಳಗಿನ ಲಿಂಕ್‌ ಮೂಲಕ ನೀವು ಆನ್‌ ಲೈನ್‌ ಪೇಮೆಂಟ್‌ ಮಾಡಬಹುದು.

4. ಶಾಲಾ ಅಭಿವೃದ್ಧಿ ಮತ್ತು ಸಾಮಾನ್ಯ ದೇಣಿಗೆ
ಸಂಸ್ಥೆ ಹಾಗೂ ಶಾಲೆಯ  ದೈನಂದಿನ ಖರ್ಚುವೆಚ್ಛಗಳಾದ ಸಿಬ್ಬಂದಿ /ಅರೆಕಾಲಿಕ ಸಿಬ್ಬಂದಿ ವೇತನ, ವಿದ್ಯುತ್‌ ಮತ್ತು ದೂರವಾಣಿ ಬಿಲ್‌, ಕಛೇರಿ ಖರ್ಚು, ಕಲಿಕಾ ಮತ್ತು ಕ್ರೀಡಾ ಸಾಮಗ್ರಿಗಳಿಗಲ್ಲದೇ ಕಟ್ಟಡ ಮತ್ತು ಪೀಠೋಪಕರಣಗಳಿಗೆ ಈ ಹಣವನ್ನು ವಿನಿಯೋಗಿಸಲಾಗುವುದು. ಕೆಳಗಿನ ಲಿಂಕ್‌ ಮೂಲಕ ನೀವು ಆನ್‌ ಲೈನ್‌ ಪೇಮೆಂಟ್‌ ಮಾಡಬಹುದು.

5. ಗ್ರಂಥಾಲಯ ದೇಣಿಗೆ
ಶಾಲೆಯ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಗ್ರಂಥಾಲಯ ನಿಧಿಯನ್ನು ನೀಡಲು ಅವಕಾಶವಿದೆ.  ಕೆಳಗಿನ ಲಿಂಕ್‌ ಮೂಲಕ ನೀವು ಆನ್‌ ಲೈನ್‌ ಪೇಮೆಂಟ್‌ ಮಾಡಬಹುದು. ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದಾದರೆ ಸಂಸ್ಥೆಯನ್ನು ಸಂಪರ್ಕಿಸಿ.

ನಮ್ಮ ಸಂಸ್ಥೆಯ ಬ್ಯಾಂಕ್‌ ಖಾತೆಗೆ ಕೂಡ ನೇರವಾಗಿ ಹಣವನ್ನು ಜಮಾ ಮಾಡಬಹುದು.

 

ಬ್ಯಾಂಕ್‌ ಖಾತೆಯ ವಿವರ

ಖಾತೆ ಹೆಸರು:  ಮಹಾತ್ಮಾ ಗಾಂಧಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ 

ಖಾತೆ ಸಂಖ್ಯೆ: 17099048546

ಐ.ಎಫ್.‌ ಎಸ್.ಸಿ. : KVGB0009455

ಬ್ಯಾಂಕ್‌ ಹೆಸರು :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌, ಬಿದ್ರಕಾನ ಶಾಖೆ

ನಿಮ್ಮ ಅನಿಸಿಕೆ & ಸಲಹೆಗಳಿಗಾಗಿ...

ಧನ್ಯವಾದಗಳು

ನಮ್ಮನ್ನು ಸಂಪರ್ಕಿಸಿ

ಮಹಾತ್ಮಾ ಗಾಂಧಿ  ಶಿಕ್ಷಣ ಮತ್ತು ಗ್ರಾಮಣಾಭಿವೃದ್ದಿ ಸಂಸ್ಥೆ

ಪೋ: ಬಿದ್ರಕಾನ , ತಾ: ಸಿದ್ದಾಪುರ (ಉ.ಕ.) -581355
ಇ-ಮೇಲ್:‌ meardibidrakan@gmail.com
mob: ಕಾರ್ಯದರ್ಶಿಗಳು : 9448223384, ಪಿ.ಆರ್.ಒ. - 9880188846

Refund Policy:
Any donation received through this website or payment gateway in this website or any other mode of payment will not be refunded or returned. 

ಮರುಪಾವತಿ ನೀತಿ:
ಈ ಪೇಮೆಂಟ್‌ ಗಟ್‌ ವೇ ಅಥವಾ ಈ ವೆಬ್‌ ಸೈಟ್‌ ಅಥವಾ ಯಾವುದೇ ಇತರೆ ವಿಧಾನದ ಮೂಲಕ ಪಡೆದ ದೇಣಿಗೆಯನ್ನು ಮರುಪಾವತಿಸಲಾಗುವುದಿಲ್ಲ 


 

half year
year
prizefund
buildng fund
development
library
Anchor 2
MGERDI Logo Final-01.jpg
bottom of page