top of page
ಮಹಾತ್ಮಾ ಗಾಂಧಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಿದ್ರಕಾನ
ಎಮ್.ಜಿ.ಸಿ.ಎಮ್.ಪ್ರೌಢಶಾಲೆ, ಬಿದ್ರಕಾನ
ಬಿದ್ರಕಾನ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ನೀಡುವ ಮಹದುದ್ದೇಶದಿಂದ ಸ್ಥಳೀಯ ಮಹನೀಯರ ಮತ್ತು ಸಾರ್ವಜನಿಕರ ಸಹಕಾರದಿಂದ 1969ರ ಜೂನ್ ದಲ್ಲಿ ಪ್ರಾರಂಭಗೊಂಡು ಅಂದಿನಿಂದ ಇಂದಿನವರೆಗೆ ನಿರಂತರ ಪ್ರಗತಿಯ ಪಥದಲ್ಲಿ ಸಾಗುತ್ತ ಬಂದಿದೆ.
ಬಿದ್ರಕಾನ ಇದು ತಾಲೂಕು ಕೇಂದ್ರ ಸಿದ್ದಾಪುರದಿಂದ ಎಂಟು ಕಿ.ಮೀ. ದೂರದಲ್ಲಿ ಬಿದ್ರಕಾನ ಗ್ರಾಮದ ಮಧ್ಯಭಾಗದಲ್ಲಿ ನೆಲೆಗೊಂಡಿದೆ. ಚೇತೋಹಾರಿ ನೈಸರ್ಗಿಕ ಪರಿಸರ, ಸುಸಜ್ಜಿತವಾದ ಕಟ್ಟಡ, ಅಗತ್ಯ ಪೀಠೋಪಕರಣಗಳು ಮತ್ತು ಪಾಠೋಪಕರಣಗಳು, ಗ್ರಂಥ ಭಂಡಾರ, ಆಟದ ಮೈದಾನ, ಶ್ರದ್ಧೆಯಿಂದ ಶ್ರಮಿಸುವ ಸಿಬ್ಬಂದಿಗಳಿಂದ ಕೂಡಿ ಉತ್ತಮ ಶೈಕ್ಷಣಿಕ ಮಟ್ಟವನ್ನು ಕಾಯ್ದುಕೊಳ್ಳುವುದರಲ್ಲಿ ಸಫಲವಾಗಿದೆ.


bottom of page