ಎಮ್.ಜಿ. ಸಿ. ಎಮ್. ಎಸ್.ಪಿ. ಮಂಡಳದ ವೆಬ್ ಸೈಟ್ ಬಿಡುಗಡೆ
- Surendra Hegde
- Aug 16, 2021
- 1 min read
ನಮ್ಮ ಬಹುದಿನದ ಕನಸು ಇಂದು ನನಸಾಗಿದೆ. ನಮ್ಮ ಸಂಸ್ಥೆಯ ಒಂದು ವೆಬ್ ಸೈಟ್ ಮಾಡಬೇಕೆಂದು ಅನೇಕ ದಿನಗಳಿಂದ ಆಲೋಚನೆಯಿತ್ತು. ಅಂತೆಯೇ ಈ ಕೆಲವು ದಿನಗಳಿಂದ ಆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆವು. ಅಂತೆಯೇ ಇಂದು ಸ್ವಾತಂತ್ರ್ಯೋತ್ಸವದ ಶುಭ ದಿನದಂದು ವೆಬ್ ಸೈಟ್ ನ್ನು ಪೂರ್ಣಗೊಳಿಸಿ, publish ಮಾಡಿದ್ದೇವೆ. ನಮ್ಮ ತಿಳುವಳಿಕೆಯ ಮಿತಿಯಲ್ಲಿ ಪೇಜ್ ಗಳನ್ನು ಸಿದ್ಧಪಡಿಸಿದ್ದೇವೆ. ಇನ್ನೂ ಆಕರ್ಷಕವಾಗಿ ಅದನ್ನು update ಮಾಡಲು ನಿಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯ.
ಅತಿ ಕಡಿಮೆ ಸಮಯದಲ್ಲಿ ವೆಬ್ ಸೈಟ್ ತಯಾರಿಸಿ ಬಿಡುಗಡೆ ಗೊಳಿಸಲು ಶ್ರಧ್ದೆಯಿಂದ ಕೆಲಸಮಾಡಿದ ನಮ್ಮ ಪ್ರೌಢಶಾಲಾ ಶಿಕ್ಷಕಿಯಾದ ಶ್ರಿಮತಿ ಸಂಧ್ಯಾ ಶಾಸ್ತ್ರಿಯವರಿಗೆ ವಯಕ್ತಿಕವಾಗಿ ಮತ್ತು ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು
Comments