“ಕಲಾ ಸಂಪದ” ಲಲಿತ ಕಲಾ ಕೇಂದ್ರ ಪ್ರಾರಂಭ
- Surendra Hegde
- Jul 13, 2022
- 1 min read
ಬಿದ್ರಕಾನ ಸುತ್ತ ಮುತ್ತಲಿನ ಜನರು ಕಲೆಗೆ ಪ್ರೋತ್ಸಾಹಿಸುತ್ತ ಬಂದವರು. ನಮ್ಮ ಸಂಸೃತಿಯ ಪ್ರತೀಕವಾದ ಸಂಗೀತ, ಯಕ್ಷಗಾನ, ಭರತನಾಟ್ಯ ಮುಂತಾದ ಕಲೆಗಳನ್ನು ಪ್ರೀತಿಸುತ್ತಾ , ಪೋಷಿಸುತ್ತಾ ಬಂದಿದ್ದಾರೆ. ಊರಿನ ಪ್ರತಿ ಮನೆಯಲ್ಲೂ ಹಿಂದೂಸ್ಥಾನಿ ಸಂಗೀತಾಸಕ್ತರು, ಯಕ್ಷಗಾನ ಪ್ರಿಯರು, ಭರತನಾಟ್ಯ ಪ್ರಿಯರು ಸಿಗುತ್ತಾರೆ. ಮೊದಲಿನಿಂದಲೂ ಇಲ್ಲಿ ಸಂಗೀತ ಶಾಲೆ ಮತ್ತು ಭರತನಾಟ್ಯ ಶಾಲೆಗಳು ನಡೆಯುತ್ತಿದ್ದರೂ ಕೆಲವು ತಾಂತ್ರಿಕ ತೊಂದರೆಗಳಿಂದ ಸ್ಥಗಿತಗೊಂಡಿತ್ತು. ಇದರಿಂದಾಗಿ ಕಲೆಯಲ್ಲಿ ಆಸಕ್ತಿ ಇರುವ ಹಲವಾರು ಮಕ್ಕಳಿಗೆ ಕಲಿಕೆಗೆ ಬೇರೆಡೆಗೆ ಹೋಗುವ ಅನಿವಾರ್ಯತೆ ಉಂಟಾಗಿತ್ತು.
ನಮ್ಮ ಪ್ರೌಢಶಾಲೆಯ ಮಕ್ಕಳಲ್ಲಿರುವ ಕಲಾಸಕ್ತಿಯನ್ನು ಗಮನಿಸಿದ ನಮ್ಮ ಪ್ರೌಢಶಾಲಾ ಶಿಕ್ಷಕರು ಮಕ್ಕಳ ಕಲಾ ಪ್ರತಿಭೆಯನ್ನು ಹೊರಹಾಕಲು ಆಗುತ್ತಿರು ಸಮಸ್ಯೆಯನ್ನು ತಪ್ಪಿಸಲು ನಮ್ಮ ಪ್ರೌಢಶಾಲೆಯಲ್ಲಿಯೇ ಕಲಾ ಶಿಕ್ಷಣವನ್ನು ಪ್ರಾರಂಭಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಆಡಳಿತ ಮಂಡಳಿಯವರನ್ನು ಕೋರಿಕೊಂಡಿದ್ದರು. ಇದನ್ನು ಪರಿಗಣಿಸಿದ ಆಡಳಿತ ಮಂಡಳಿಯು ನಮ್ಮ ಪ್ರೌಢಶಾಲೆಯಲ್ಲಿ ಕಲಾ ಸಂಪದ ಎಂಬ ಹೆಸರಿನಲ್ಲಿ ಲಲಿತ ಕಲಾ ಕೇಂದ್ರವನ್ನು ಪ್ರಾರಂಭಿಸಿದೆ.
ಗುರು ಪೂರ್ಣಿಮೆಯ ಶುಭದಿನವಾದ ಇಂದು ದಿನಾಂಕ 13-07-2022 ಬುಧವಾರ, ನಮ್ಮ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರು ಹಾಗೂ ಆಡಳಿತ ಮಂಡಳಿಯ ಸದಸ್ಯರೂ ಆದ ಶ್ರೀ ಎಸ್.ವಿ. ಹೆಗಡೆ ಮಗೇಗಾರ ಅವರಿಂದ ಉದ್ಘಾಟನೆ ಗೊಂಡ ಈ ಕೇಂದ್ರದಲ್ಲಿ ಸದ್ಯಕ್ಕೆ ಹಿಂದೂಸ್ಥಾನಿ ಗಾಯನ ಮತ್ತು ತಬಲಾ ತರಗತಿಗಳನ್ನು ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಭರತ ನಾಟ್ಯ, ಚಿತ್ರಕಲೆ ಮುಂತಾದ ಕಲೆಗಳ ಕಲಿಕೆಗೂ ಅವಕಾಶ ಮಾಡಿಕೊಡಬೇಕೆಂಬುದು ನಮ್ಮ ಆಶಯ.
ಈ ಕೆಂದ್ರದಲ್ಲಿ ನಮ್ಮ ಪ್ರೌಢಶಾಲಾ ಮಕ್ಕಳಿಗಲ್ಲದೇ ಇತರರಿಗೂ ಕಲಿಕೆಗೆ ಅವಕಾಶವಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀಮತಿ ಸಂಧ್ಯಾ ಶಾಸ್ತ್ರಿ (ಪಿ.ಆರ್. ಓ. & ಸಂಯೋಜಕರು): 9880188846, 8431251634
ಶ್ರೀ ಸುರೇಂದ್ರ ಹೆಗಡೆ (ಕಾರ್ಯದರ್ಶಿ MEARDI, BIDRAKAN): 9108351884, 9448223384
Comments