ಬರವಣಿಗೆಗೊಂದು ಅವಕಾಶ…
- smskeregadde
- Jun 14, 2022
- 1 min read
ಮನಸಿಗೆ ಬಂದ ಹತ್ತಾರು ಆಲೋಚನೆಗಳನ್ನು ಅಥವಾ ಚಿಂತನೆಗಳನ್ನು ವ್ಯಕ್ತಪಡಿಸಲು ಬರವಣಿಗೆ ಅತ್ಯುತ್ತಮ ಮಾರ್ಗ. ಮಾತುಗಳಲ್ಲಿ ಹೇಳಲಾಗದ ವಿಷಯಗಳನ್ನು ಬರವಣಿಗೆಯ ಮೂಲಕ ಹಂಚಿಕೊಳ್ಳಬಹುದು. ಅದಲ್ಲದೆ ಎಷ್ಟೋ ಸಂದರ್ಭದಲ್ಲಿ ಮಾತನಾಡುವ ಮೊದಲು ಆ ಮಾತುಗಳನ್ನು ಬರವಣಿಗೆಗಿಳಿಸಿ, ಅದನ್ನು ಒಪ್ಪವಾಗಿಸಿ ಮಾತನಾಡುತ್ತೇವೆ. ಮಾತುಗಳನ್ನು ಅಕ್ಷರಾಲಂಕಾರದಲ್ಲಿ ಸಿಂಗರಿಸಿ ಅಭಿವ್ಯಕ್ತಗೊಳಿಸಿದಾಗ ಅದರ ಚಂದವೇ ಬೇರೆ; ಅಲ್ಲದೆ ಅದು ಓದಿದವರ ಅಥವಾ ಕೇಳಿದವರ ಮನದಲ್ಲಿ ಹಾದು ಹೋದರೆ ನಮಗೊಂದು ಸಾರ್ಥಕತೆ.
ಹಾಗಾಗಿ ನಾವು ನಮ್ಮಅನೇಕ ಆಲೋಚನೆಗಳನ್ನು ಸಣ್ಣ-ಪುಟ್ಟ ಬರಹಗಳ ಮೂಲಕ ಹಂಚಿಕೊಳ್ಳಬಹುದು. ಆ ಆಲೋಚನೆಗಳು ನಮ್ಮ ಮಹಾತ್ಮಾ ಗಾಂಧಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೆಬ್ಸೈಟ್ ಬ್ಲಾಗ್ ಮತ್ತು ಫೇಸ್ ಬುಕ್ ಪೇಜ್ ಮೂಲಕ ಓದುಗರಿಗೆ ತಲುಪುತ್ತದೆ. ತೀರಾ ವೈಯಕ್ತಿಕ ಎನಿಸದ, ಒಂದಷ್ಟು ಸಾಮಾಜಿಕ ಕಳಕಳಿಯುಳ್ಳ, ಅಥವಾ ನಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸಾದರಪಡಿಸುವ ಬರಹಗಳನ್ನು ನೀವು ನಮ್ಮೊಂದಿಗೆ ಹಂಚಿಕೊಳ್ಳಬಹುದು.
Comments